Our Visitor

007500
%E0%B2%85%E0%B2%AA%E0%B3%8B%E0%B2%B2%E0%B3%8A %E0%B2%86%E0%B2%B8%E0%B3%8D%E0%B2%AA%E0%B2%A4%E0%B3%8D%E0%B2%B0%E0%B3%86%E0%B2%97%E0%B3%86 %E0%B2%86%E0%B2%A1%E0%B2%B3%E0%B2%BF%E0%B2%A4%E0%B2%BE%E0%B2%A7%E0%B2%BF%E0%B2%95%E0%B2%BE%E0%B2%B0%E0%B2%BF %E0%B2%A8%E0%B3%87%E0%B2%AE%E0%B2%BF%E0%B2%B8%E0%B2%BF 1

ಅಪೋಲೊ ಆಸ್ಪತ್ರೆಗೆ ಆಡಳಿತಾಧಿಕಾರಿ ನೇಮಿಸಿ

ಬೆಂಗಳೂರು: ಜಾಗ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿರುವ ಬನ್ನೇರುಘಟ್ಟರಸ್ತೆಯ ಅಪೋಲೊ ಆಸ್ಪತ್ರೆಗೆ ಆಡಳಿತಾಧಿಕಾರಿ ನೇಮಿಸಲು ಜಿಲ್ಲಾಡಳಿತ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಆಸ್ಪತ್ರೆಯಲ್ಲಿನ ಸಾಮಗ್ರಿ ತೆರವುಗೊಳಿಸಲು ಆಡಳಿತ ಮಂಡಳಿ ಪಡೆದಿದ್ದ ಕಾಲಾವಕಾಶ ಮುಕ್ತಾಯವಾಗಿದ್ದರೂ, ಆಸ್ಪತ್ರೆಗೆ ಈಗಲೂ ರೋಗಿಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ನಿರ್ಧಾರ ತೆಗೆದುಕೊಂಡಿದೆ.

ಆಡಳಿ ತಾಧಿಕಾರಿ ನೇಮಿಸುವ ಸಂಬಂಧ ಜಿಲ್ಲಾಡಳಿತದ ಶಿಫಾರಸು ಪತ್ರ ಗುರು ವಾರವೇ ಸರ್ಕಾರಕ್ಕೆ ತಲು ಪಿದೆ. ಸೋಮವಾರ ದೊಳಗೆ ಆಡಳಿತಾಧಿಕಾರಿ ಆಸ್ಪತ್ರೆಗೆ ಪ್ರವೇಶಿಸುವುದು ಖಚಿತವೆಂದು ಮೂಲಗಳು ಸ್ಪಷ್ಟಪಡಿಸಿವೆ. ಈ ಮಧ್ಯೆ ಗುರುವಾರ, ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅಪೋಲೊ ಆಸ್ಪತ್ರೆಗೆ
ಭೇಟಿ ನೀಡಿ ಪರಿಶೀಲಿ ಸಿದರು. ಅವರೊಂದಿಗೆ ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಜನಿ ಇದ್ದರು. ಇಬ್ಬರು ಅಧಿಕಾರಿಗಳು ಭೇಟಿ ನೀಡಿದ್ದಾಗ ಆಸ್ಪತ್ರೆ ವಾರ್ಡ್ಗಳಲ್ಲಿ ರೋಗಿಗಳು ದಾಖಲಾಗಿದ್ದರು.

= ಜಾಗ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಆಸ್ಪತ್ರೆ ಜಿಲ್ಲಾಡಳಿತದ ವಶಕ್ಕೆ
= ಆದರೂ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿರುವ ಅಪೋಲೋ ಆಸ್ಪತ್ರೆ
= ಆಸ್ಪತ್ರೆಗೆ ಭೇಟಿ ನೀಡಿದ ನಗರ ಡಿಸಿ ವಿ.ಶಂಕರ್
= ಗುರುವಾರವೇ ಸರ್ಕಾರಕ್ಕೆ ತಲುಪಿದ ಶಿಫಾರಸು ಪತ್ರ

ಇಷ್ಟರಲ್ಲಿಯೇ ಆಸ್ಪತ್ರೆಯಲ್ಲಿನ ಸಾಮಗ್ರಿ ತೆರವುಗೊಳಿಸುವುದಾಗಿ ಹೇಳಿದ್ದ ಆಡಳಿತ ಮಂಡಳಿ, ತನ್ನ ಮಾತನ್ನು ಮೀರಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಶಂಕರ್ ಎಚ್ಚರಿಸಿದ್ದಾರೆಂದು ಇಲಾಖೆ ಮೂಲಗಳು ತಿಳಿಸಿವೆ.