Our Visitor

007500
2

ವಿ.ಶಂಕರ್ ರವರು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಕ್ರಿಯಾಶೀಲ, ದಕ್ಷ ಧೈರ್ಯಶಾಲಿ, ಸಮರ್ಥ, IAS ಅಧಿಕಾರಿಯಾಗಿ ಜನಮಾನಸದಲ್ಲಿ ಮತ್ತು ಆಡಳಿತಾತ್ಮಕ ವರ್ಗದಲ್ಲಿ ಅಸಾಧರಣ ಪ್ರಖ್ಯಾತಿಯನ್ನು ಗಳಿಸಿದ್ದಾರೆ. ಇವರು 2014 ರಿಂದ 2018 ರವರೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ಸಂದರ್ಭದಲ್ಲಿ ಭೂಗಳ್ಳರಿಂದ ಒತ್ತುವರಿಯಾಗಿದ್ದ 4 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ 18.868 ಎಕರೆ ಭೂಮಿಯನ್ನು ಯಾವುದೇ ರಾಜಕೀಯ ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಎದೆಗಾರಿಕೆಯಿಂದ ತಾವೇ ಮುಂದೆ ನಿಂತು ಒತ್ತುವರಿ ತೆರವುಗೊಳಿಸಿದ ಕಾರ್ಯವು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ದಂತಕಥೆಯಾಗಿ ಉಳಿದುಕೊಂಡಿದೆ. ಇವರ ಈ ಕಾರ್ಯವೈಖರಿಯನ್ನು ಗಮನಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ. ದಿವಂಗತ ಎಚ್.ಎಸ್ ದೊರೆಸ್ವಾಮಿಯವರು ವಿ.ಶಂಕರ್ ರವರ ಕಛೇರಿಗೆ ಭೇಟಿ ನೀಡಿ ಪ್ರಶಂಶಿಸಿ ಆಶೀರ್ವದಿಸಿದರು. ಹಾಗೂ ಇಂತಹ ಕೆಚ್ಚೆದೆಯ ಅಧಿಕಾರಿಯನ್ನು ನೇಮಿಸಿದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಸಿದ್ದರಾಮಯ್ಯನವರನ್ನು ಮನಃ ಪೂರ್ವಕವಾಗಿ ಅಭಿನಂದಿಸಿದರು, ವಿ.ಶಂಕರ್ರವರು ಶ್ರೀ ಸಿದ್ದರಾಮಯ್ಯನವರ ಪರಮಾಪ್ತ ಮತ್ತು ನಂಬಿಕಸ್ಥ ಅಧಿಕಾರಿಯಾಗಿದ್ದರು. ಬೆಂಗಳೂರಿನ ಭೂಗಳ್ಳರಿಗೆ ಸಿಂಹಸ್ವಪ್ನವಾಗಿದ್ದ ವಿ.ಶಂಕರ್ ರವರನ್ನು ಮಾಧ್ಯಮಗಳು “ಡೆಮಾಲಿಷನ್ ಡಿ.ಸಿ.” ಎಂಬ ಬಿರುದನ್ನು ನೀಡಿದ್ದವು.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ವಿ,ಶಂಕರ್ ರವರು, ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದು ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗ್ರಾಮೀಣಾಭಿವೃದ್ಧಿ ವಿಷಯದಲ್ಲಿ ಸ್ನಾತಕೋತ್ತರ (ಎಮ್.ಎ) ಪದವಿಯನ್ನು ಪಡೆದುಕೊಂಡು ಇವರು ಕೆ.ಪಿ.ಎಸ್.ಸಿ 1985 ರ ಬ್ಯಾಚ್ ನಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಯಾಗಿ ಆಯ್ಕೆಯಾಗಿ ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿ ,1994 ರಲ್ಲಿ ಬಿಜಾಪುರ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಕಲಿಯುಗ ದೈವ, ಸಾಕ್ಷತ್ ದತ್ತಾವತಾರಿ ಶ್ರೀ.ಶ್ರೀ.ಶ್ರೀ.ಸದ್ಗುರು ಸದಾನಂದ ಬಾಬಾ ರವರ ಆಶೀರ್ವಾದದಿಂದ ಕೆ.ಎ.ಎಸ್ ಆಗಿ ಕಂದಾಯ ಇಲಾಖೆಗೆ ಪದೋನ್ನತಿಗೊಂಡರು ನಂತರ ಇವರು ಬೆಳಗಾವಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.ಎರಡು ಸಲ ಮೈಸೂರು ಮೂಡಾ ಆಯುಕ್ತರಾಗಿ, ಎರಡು ಸಲ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಹಾಗೂ ಮೈಸೂರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾಗಿ, ಬೆಳಗಾವಿ ಜಿಲ್ಲೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ, ಬೆಂಗಳೂರು ನಗರ ಮಹಾನಗರ ಪಾಲಿಕೆಯ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

ವಿ. ಶಂಕರ್ ರವರು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಾಗಿದ್ದಾಗ ನಡೆದ 2013 ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ, ಜಿಲ್ಲೆಯಲ್ಲಿ ಈ ಹಿಂದೆ ನಡೆಯುತ್ತಿದ್ದ ಎಲ್ಲಾ ರೀತಿಯ ಚುನಾವಣಾ ಆಕ್ರಮಗಳಿಗೆ ತಡೆಹಾಕಿ, ಶಾಂತಿಯುತವಾಗಿ ಮತದಾನ ನಡೆಸುವ ಮೂಲಕ ಇಡೀ ರಾಜ್ಯದಲ್ಲಿ ಅತಿಹೆಚ್ಚು 83% ಶೇಕಡವಾರು ಮತ ಚಲಾವಣೆಗೊಳ್ಳಲು ಕಾರಣಕರ್ತರಾಗಿದ್ದು, ವಿ.ಶಂಕರ್ ರವರನ್ನು ಅಂದಿನ ಕೇಂದ್ರ ಚುನಾವಣಾ ಆಯೋಗವು ಮುಕ್ತ ಕಂಠದಿಂದ ಅಭಿನಂದಿಸಿತು. 2013 ರಲ್ಲಿ ಶ್ರೀ ಸಿದ್ದರಾಮಯ್ಯ ನವರು, ಅಧಿಕಾರ ಸ್ವೀಕರಿಸಿದ ಮರು ದಿನವೇ ಬೆಂಗಳೂರು ಗ್ರಾಮಾಂತರದ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿದರು, ಜನ ದೂರದಿಂದ ಬೆಂಗಳೂರು ನಗರದಲ್ಲಿನ ಜಿಲ್ಲಾಧಿಕಾರಿ ಕಛೇರಿಗೆ ಬರುವುದಕ್ಕೆ ಕಷ್ಟವಾಗುತ್ತಿತ್ತು ಇದನ್ನು ಮನಗಂಡ ವಿ.ಶಂಕರ್ ರವರು ಜಿಲ್ಲಾಡಳಿತವನ್ನು ದೇವನಹಳ್ಳಿಗೆ ವರ್ಗಾಯಿಸಲು ಸೂಕ್ತ ಜಾಗವನ್ನು ಗುರ್ತಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಸ್ಥಳವನ್ನು ಮಂಜೂರು ಮಾಡಿಸಿದರು ಈ ಕಾರಣಕ್ಕಾಗಿಯೇ ಬೆಂಗಳೂರು ಗ್ರಾಮಾಂತರ ಜನ ಇವತ್ತಿಗೂ ವಿ.ಶಂಕರ್ರವರನ್ನು ನೆನಪಿಸಿಕೊಳ್ಳುತ್ತಾರೆ.

ಇವರು ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಳ್ಳುವ ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮರುಳು ಮಾಫಿಯಾ ಅವ್ಯಾಹತವಾಗಿ ನಡೆಯುತಿತ್ತು. ಇದನ್ನು ಗಮನಿಸಿದ ವಿ.ಶಂಕರ್ ರವರು, ಪೊಲೀಸರಿಗೂ ತಿಳಿಸದೆ, ಪೊಲೀಸ್ ಇಲಾಖೆಯ ರಕ್ಷಣೆಯನ್ನು ಪಡೆಯದೆ. ತಾವೇ ಖುದ್ದಾಗಿ ಮರುಳು ದಂಧೆ ನಡೆಯುವ ಜಾಗಗಳಿಗೆ ರಾತ್ರೋರಾತ್ರಿ ದಾಳಿಮಾಡಿ, ಸೀಜ್ ಮಾಡುವ ಮೂಲಕ ಮರುಳು ದಂಧೆಗೆ ಸಂಪೂರ್ಣ ಬ್ರೇಕ್ ಹಾಕಿದರು.

Untitled design 6
3

ಎಂ ವಿ. ಶಂಕರ್ ರವರ ಈ ದಿಟ್ಟತನವನ್ನು ಹಾಗೂ ಕೆಚ್ಚೆದೆಯನ್ನು ಕಂಡ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರು, ಇವರನ್ನು 2014 ಆಗಸ್ಟ್ನಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾಗಿ ನೇಮಿಸಿದರು, 2006 ರಲ್ಲಿ ಕುಮಾರಸ್ವಾಮಿ ಮೊದಲನೇ ಬಾರಿಗೆ ல் ಆಗಿದ್ದಾಗ ಬೆಂಗಳೂರಿನಾದ್ಯಂತ ಭೂಗಳ್ಳರು ಒತ್ತುವರಿ ಮಾಡಿಕೊಂಡಿರೋ ಭೂಮಿಯ ಸಂಪೂರ್ಣ ವರದಿ ನೀಡುವಂತೆ ಎ.ಟಿ.ರಾಮಸ್ವಾಮಿ ನೇತೃತ್ವದ ಸದನ ಸಮಿತಿ ರಚಿಸಿದ್ದರು. ಆ ವರದಿಯಲ್ಲಿ 11,000 ಎಕರೆ ಭೂಮಿ ಒತ್ತುವರಿ ಆಗಿತ್ತು. ರಾಮಸ್ವಾಮಿಯವರು ನೀಡಿದ್ದ ವರದಿ ಧೂಳು ಹಿಡಿದು ಕುಳಿತಿತ್ತು ಈ ವರದಿಯನ್ನು ವಿ.ಶಂಕರ್ ರವರ ಕೈಗಿಟ್ಟು ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ನೀಡಿದರು. ವಿ.ಶಂಕರ್ ರವರು ಜವಾಬ್ದಾರಿ ವಹಿಸಿಕೊಂಡ ಕೂಡಲೇ ನಿರೀಕ್ಷೆಗೂ ಮೀರಿ ಒತ್ತುವರಿಯಾಗಿದ್ದ ಭೂಮಿಯನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡರು 11 ಸಾವಿರ ಎಕರೆ ಬದಲಿಗೆ ಸರ್ಕಾರಕ್ಕೆ 18,868 ಎಕರೆ ಭೂಮಿಯನ್ನು ತೆರವುಗೊಳಿಸಿದರು. ಇದರಲ್ಲಿ ಅನೇಕ ಶಾಸಕರು, ಸಚಿವರು ಹಾಗೂ ಅತ್ಯಂತ ಪ್ರಸಿದ್ಧಿ ಹೊಂದಿದ್ದ ಇಬ್ಬರು ನಿವೃತ್ತ ಪೋಲೀಸ್ ಆಯುಕ್ತರು ಒಳಗೊಂಡಂತೆ ಒತ್ತುವರಿ ಮಾಡಿಕೊಂಡಿದ್ದ ಭೂಮಿಯನ್ನು ಸರ್ಕಾರದ ಸುಪರ್ದಿಗೆ ಪಡೆಯುವ ಮೂಲಕ 4 ಲಕ್ಷ ಕೋಟಿ ರೂಗಳಿಗೂ ಹೆಚ್ಚು ಮೌಲ್ಯದ ಭೂಮಿಯನ್ನು ಸರ್ಕಾರಕ್ಕೆ ಉಳಿಸಿದರು. ಇವರ ಅಧಿಕಾರವಧಿಯಲ್ಲಿ ಬ್ರಿಟೀಷರ ಕಾಲದಲ್ಲಿ ಸ್ಥಾಪಿತವಾದ ಪ್ರತಿಷ್ಠಿತ “ಬೆಂಗಳೂರು ಕ್ಲಬ್ನಲ್ಲಿ” ಅಬಕಾರಿ ನಿಯಮಗಳನ್ನು ಗಾಳಿಗೆ ತೂರಿ, ಸ್ವಇಚ್ಚೆಯಂತೆ ನಡೆದುಕೊಳ್ಳುತ್ತಿದ್ದ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸಿ ಅಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಮಾಡಿದ್ದು ಇತಿಹಾಸವೆ ಸರಿ.

2015 ರಲ್ಲಿ ಖುದ್ದು ಪ್ರಧಾನಿ ಮೋದಿಯವರು ವಿ.ಶಂಕರ್ ರವರ ಈ ಸಾಧನೆಯನ್ನು ಗುರ್ತಿಸಿ ಟ್ವಿಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶಂಕರ್ರವರ ರೀತಿಯಲ್ಲಿ ದೇಶದ ನಾನಾ ನಗರಗಳಲ್ಲಿ ಒತ್ತುವರಿ ಆಗಿರೋ ಸರ್ಕಾರಿ ಭೂಮಿಯನ್ನು ತೆರವುಗೊಳಿಸೋ ಕೆಲಸ ಆಗಬೇಕೆಂದು ಪ್ರಧಾನಿ ಮೋದಿಯವರು ಹೇಳಿದರು. 

2014 ರಲ್ಲಿ ವಿಜಯ ಕರ್ನಾಟಕ ಕೊಡ ಮಾಡುವ “ವರ್ಷದ ವ್ಯಕ್ತಿ” ಪ್ರಶಸ್ತಿಗೂ ವಿ.ಶಂಕರ್ ರವರು ಭಾಜನರಾಗಿದ್ದಾರೆ. ಸೆಪ್ಟೆಂಬರ್ 2022 ರಂದು ವಿಪಕ್ಷ ನಾಯಕರಾಗಿದ್ದ ಶ್ರೀ ಸಿದ್ದರಾಮಯ್ಯ ನವರು ತಮ್ಮ ಟ್ವಿಟರ್ ಖಾತೆಯಲ್ಲಿ ” ತಮ್ಮ ಐದು ವರ್ಷಗಳ ಅವಧಿಯಲ್ಲಿ ಬೆಂಗಳೂರು ನಗರದ ಸುಮಾರು 18,868 ಎಕರೆ ಭೂಮಿಯನ್ನು ಭೂಗಳ್ಳರಿಂದ ತೆರವುಗೊಳಿಸಿದ್ದು. ತಮ್ಮ ಅಂದಿನ ಸರ್ಕಾರದ ಸಾಧನೆ ಎಂದು ಬರೆದುಕೊಂಡಿದ್ದರು” ಅಸಲಿಗೆ ಅವತ್ತಿನ ತೆರವು ಕಾರ್ಯದ ಸಂಪೂರ್ಣ ಕ್ರೆಡಿಟ್ ವಿ.ಶಂಕರ್ ರವರಿಗೆ ಸಲ್ಲುತ್ತದೆ.

“ಪ್ರಧಾನಮಂತ್ರಿ ವಿಶೇಷ ಪ್ರಶಸ್ತಿ” ನೀಡಲು ಆಯ್ಕೆ ಸಮಿತಿ ವಿ.ಶಂಕರ್ ರವರ ಹೆಸರನ್ನು ಶಿಫಾರಸ್ಸು ಮಾಡಿತ್ತು. ಆದರೆ ಸಿದ್ದರಾಮಯ್ಯರ ಜೊತೆಗಿನ ಆತ್ಮೀಯತೆಯ ಬಾಂಧವ್ಯಕ್ಕೆ ಚ್ಯುತಿ ಬರಬಾರದೆಂದು ಖುದ್ದು ವಿ. ಶಂಕರ್ ರವರೇ ನಯವಾಗಿ ಪ್ರಧಾನಮಂತ್ರಿ ಪ್ರಶಸ್ತಿಯನ್ನು ತಿರಸ್ಕರಿಸಿದರು. ಇವರ ಅಧಿಕಾರಾವಧಿಯಲ್ಲಿ ಧ್ವನಿ ಇಲ್ಲದ ಅದೆಷ್ಟೋ ಸಮುದಾಯಗಳ ಸಂಘ ಸಂಸ್ಥೆಗಳಿಗೆ ಜಮೀನು ಮಂಜೂರು ಮಾಡಿದ್ದಾರೆ. ವಿಶೇಷವೇನೆಂದರೆ ಹಿಂದಿನ ವಿಷ್ಣುವರ್ಧನ್ ರವರ ಸ್ಮಾರಕದ 10 ಗುಂಟೆ ಜಾಗ ಉಳಿದಿದೆ ಎಂದರೆ ಅದಕ್ಕೂ ಕಾರಣ ವಿ ಶಂಕರ್, ಅವತ್ತು ಡಿ.ಸಿ.ಯಾಗಿ ಅಭಿಮಾನ್ ಸ್ಟುಡಿಯೋ ಸರ್ಕಾರಿ ಸ್ವತ್ತು ಎಂದು ಆದೇಶಿಸದೇ ಹೋಗಿದ್ದರೆ ಇವತ್ತು ಆ ಜಾಗವೂ ಉಳಿಯುತ್ತಿರಲಿಲ್ಲ,

ಇವರ ಅವಧಿಯ ಇನ್ನೊಂದು ಸಾಧನೆ ಎಂದರೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಆರಂಭಿಸಿರುವ ಡಾ॥ ರಾಜಕುಮಾರ್ ಅಧ್ಯಯನ ಪೀಠ ವಿಸ್ತರಣಾ ಕೇಂದ್ರಕ್ಕೆ ಎರಡು ಎಕರೆ ಜಮೀನನ್ನು ಮಂಜೂರು ಮಾಡಿದ್ದು, ಇದು 2019 ರಲ್ಲಿ ಜಮೀನಿನ ಪಹಣಿ ಕೂಡ ಆಗಿದೆ. ಬೆಂಗಳೂರಿನ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಶೂಶೂಷೆ ಪಡೆಯುತಿದ್ದ ಆಮ್ ಆದ್ಮ ಪಕ್ಷದ ನಾಯಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್ ರವರು ವಿ.ಶಂಕರ್ ರವರಿಗೆ ಒಂದು ಆಫರ್ ಅನ್ನು ನೀಡಿದ್ದು, ನಿಮ್ಮ ಸೇವಾವಧಿ ಮುಗಿದ ಮೇಲೆ ನಮ್ಮ ಪಕ್ಷವನ್ನು ಸೇರಿಕೊಳ್ಳಿ ಎಂದರು. ಆದರೆ ಸಿದ್ದರಾಮಯ್ಯ ರವರ ಆತ್ಮೀಯ ವರ್ಗದಲ್ಲಿ ಗುರುತಿಸಿಕೊಂಡಿದ್ದ ಕಾರಣಕ್ಕೆ ಅರವಿಂದ ಕೇಜ್ರವಾಲ್ ರವರ ಮಾತನ್ನು ತಿರಸ್ಕರಿಸಿದರು. ವಿ.ಶಂಕರ್ ರವರನ್ನು ಜೀ ಕನ್ನಡ ವಾಹಿನಿಯ ಪ್ರತಿಷ್ಟಿತ ಕಾರ್ಯಕ್ರಮವಾದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಹಲವಾರು ಬಾರಿ ವಿ.ಶಂಕರ್ ರವರು ನಯವಾಗಿ ತಿರಸ್ಕರಿಸಿದರು. 

ವಿ.ಶಂಕರ್ ರವರು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಅಂದಿನ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ರವರೊಂದಿಗೆ ಪತ್ರಿಕಾಗೋಷ್ಟಿ ನಡೆಸಿ “ಜಿಲ್ಲಾಡಳಿತದ ನಡೆ ಜನರ ಬಳಿಗೆ” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಈ ಪುಸ್ತಕದ ವಿಶೇಷತೆ ಎಂದರೆ ಅಂದಿನ ಕರ್ನಾಟಕ ರಾಜ್ಯ ಸರ್ಕಾರದ ಮತ್ತು ಬೆಂಗಳೂರು ನಗರ ಜಿಲ್ಲಾಡಳಿತದ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಂತಹ ಒಂದು ಪ್ರಯತ್ನವಾಗಿತ್ತು.

%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B2%BF%E0%B2%A8%E0%B2%B2%E0%B3%8D%E0%B2%B2%E0%B2%BF %E0%B2%92%E0%B2%82%E0%B2%A6%E0%B3%87 %E0%B2%A6%E0%B2%BF%E0%B2%A8 8500 %E0%B2%95%E0%B3%8B%E0%B2%9F%E0%B2%BF%E0%B2%AF %E0%B2%AD%E0%B3%82%E0%B2%AE%E0%B2%BF %E0%B2%B5%E0%B2%B6

ಬೆಂಗಳೂರಿನಲ್ಲಿ ಒಂದೇ ದಿನ 8500 ಕೋಟಿಯ ಭೂಮಿ ವಶ

ಬೆಂಗಳೂರಿನಲ್ಲಿ ಒಂದೇ ದಿನ 8500 ಕೋಟಿಯ ಭೂಮಿ ವಶ ಕೆರೆ, ಅರಣ್ಯ ಮತ್ತಿತರ ಅತಿಕ್ರಮ ವಿರುದ್ಧ ಭಾರೀ ಕಾರ್ಯಾಚರಣೆ ಒತ್ತುವರಿ ಆಗಿದ್ದ...
%E0%B2%AC%E0%B2%97%E0%B3%86%E0%B2%B9%E0%B2%B0%E0%B2%BF%E0%B2%A6 %E0%B2%B5%E0%B2%BF%E0%B2%B7%E0%B3%8D%E0%B2%A3%E0%B3%81 %E0%B2%B8%E0%B3%8D%E0%B2%AE%E0%B2%BE%E0%B2%B0%E0%B2%95 %E0%B2%B5%E0%B2%BF%E0%B2%B5%E0%B2%BE%E0%B2%A6 1

ಬಗೆಹರಿದ ವಿಷ್ಣು ಸ್ಮಾರಕ ವಿವಾದ

ದಿವಂಗತ ನಟ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಜಾಗದ ವಿವಾದವು ಕೊನೆಗೂ ಬಗೆಹರಿದಿದೆ. ಸ್ಮಾರಕ ನಿರ್ಮಾಣಕ್ಕೆ ಎರಡು ಎಕರೆ ನೀಡಲು ಅಭಿಮಾನ್...
%E0%B2%AA%E0%B2%BE%E0%B2%B3%E0%B3%81 %E0%B2%95%E0%B3%8A%E0%B2%82%E0%B2%AA%E0%B3%86%E0%B2%AF%E0%B2%82%E0%B2%A4%E0%B2%BE%E0%B2%A6 %E0%B2%B8%E0%B2%BE%E0%B2%B0%E0%B2%95%E0%B3%8D%E0%B2%95%E0%B2%BF %E0%B2%95%E0%B3%86%E0%B2%B0%E0%B3%86 1

ಪಾಳು ಕೊಂಪೆಯಂತಾದ ಸಾರಕ್ಕಿ ಕೆರೆ

ಸಾರಕ್ಕಿ ಕೆರೆಯ ಒತ್ತುವರಿದಾರರ ಮೇಲೆ ಗದಾಪ್ರಹಾರ ಮುಂದುವರಿಸಿದ ನಗರ ಜಿಲ್ಲಾಡಳಿತವು, ಶುಕ್ರವಾರವೂ ತೆರವು ಕಾರ್ಯಾಚರಣೆ ಕೈಗೊಂಡಿತು. ಕಟ್ಟಡಗಳ ಧ್ವಂಸ ವೀದಾಗಿ...
%E0%B2%AA%E0%B2%9F%E0%B3%8D%E0%B2%9F%E0%B2%82%E0%B2%A6%E0%B3%82%E0%B2%B0%E0%B3%81 %E0%B2%85%E0%B2%97%E0%B3%8D%E0%B2%B0%E0%B2%B9%E0%B2%BE%E0%B2%B0%E0%B2%A6%E0%B2%B2%E0%B3%8D%E0%B2%B2%E0%B2%BF %E0%B2%85%E0%B2%95%E0%B3%8D%E0%B2%B0%E0%B2%AE %E0%B2%92%E0%B2%A4%E0%B3%8D%E0%B2%A4%E0%B3%81%E0%B2%B5%E0%B2%B0%E0%B2%BF %E0%B2%A4%E0%B3%86%E0%B2%B0%E0%B2%B5%E0%B3%81 %E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%9A%E0%B2%B0%E0%B2%A3%E0%B3%86 1

ಪಟ್ಟಂದೂರು ಅಗ್ರಹಾರದಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ

ವೈಟೀಲ್ ಪಟ್ಟಂದೂರು ಅಗ್ರಹಾರದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಒತ್ತುವರಿ ತೆರವು ಕಾರ್ಯಾ ಚರಣೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಬೃಹತ್ ಕಟ್ಟಡವನ್ನು ತೆರವುಗೊಳಿಸಲಾಯಿತು...
%E0%B2%A1%E0%B2%BF.%E0%B2%B8%E0%B2%BF %E0%B2%A8%E0%B2%BE%E0%B2%A6%E0%B2%BF%E0%B2%A8%E0%B2%BF %E0%B2%AE%E0%B2%A8%E0%B3%86 %E0%B2%A8%E0%B3%86%E0%B2%B2%E0%B2%B8%E0%B2%AE

ಡಿ.ಸಿ ನಾದಿನಿ ಮನೆ ನೆಲಸಮ

ಬೆಂಗಳೂರು: ಜೆ.ಪಿ.ನಗರದ ಸಾರಕ್ಕಿ ಕೆರೆಯ ಒತ್ತುವರಿ ಕಾರ್ಯಾಚರಣೆಯ ವೇಳೆ ಜಿಲ್ಲಾಧಿಕಾರಿ ಅವರ ನಾದಿನಿಯ (ಪತ್ನಿಯ ಸೋದರಿ) ಮನೆಯನ್ನೂ ನೆಲಸಮ ಮಾಡಲಾಗಿದೆ...
%E0%B2%95%E0%B3%86%E0%B2%B0%E0%B3%86 %E0%B2%AC%E0%B2%BE%E0%B2%95%E0%B2%B0%E0%B2%BF%E0%B2%97%E0%B3%86 %E0%B2%AC%E0%B2%B0%E0%B3%86

ಕೆರೆ ಬಾಕರಿಗೆ ಬರೆ

ನಡೆದಿದ್ದು, ಯಾವುದೇ ಅಹಿತಕರ ಘಟನೆಯಾಗಲಿ ಅಥವಾ ವಾಣಿಜ್ಯ ಅಂಗಡಿ ಮಾಲೀಕರಿಂದ ಪ್ರತಿರೋಧ ఎదురాగిల్ల...
%E0%B2%95%E0%B3%86%E0%B2%B0%E0%B3%86 %E0%B2%92%E0%B2%A4%E0%B3%8D%E0%B2%A4%E0%B3%81%E0%B2%B5%E0%B2%B0%E0%B2%BF %E0%B2%A4%E0%B3%86%E0%B2%B0%E0%B2%B5%E0%B3%81 %E0%B2%A8%E0%B2%BF%E0%B2%B2%E0%B3%8D%E0%B2%B2%E0%B2%A6%E0%B3%81 %E0%B2%B8%E0%B2%BF.%E0%B2%8E%E0%B2%82 1

ಕೆರೆ ಒತ್ತುವರಿ ತೆರವು ನಿಲ್ಲದು ಸಿ.ಎಂ

ಬೆಂಗಳೂರು: ಕೆರೆ ಜಾಗ ಒತ್ತುವರಿ ವಿರುದ್ಧದ ಕಾರ್ಯಾಚರಣೆ ಮುಂದು ವರಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು...
%E0%B2%95%E0%B3%86%E0%B2%B0%E0%B3%86 %E0%B2%92%E0%B2%A4%E0%B3%8D%E0%B2%A4%E0%B3%81%E0%B2%B5%E0%B2%B0%E0%B2%BF %E0%B2%A4%E0%B3%86%E0%B2%B0%E0%B2%B5%E0%B2%BF%E0%B2%97%E0%B3%86 %E0%B2%B5%E0%B2%BF%E0%B2%AA%E0%B2%95%E0%B3%8D%E0%B2%B7%E0%B2%97%E0%B2%B3 %E0%B2%B5%E0%B2%BF%E0%B2%B0%E0%B3%8B%E0%B2%A7 %E0%B2%A6%E0%B3%8A%E0%B2%B0%E0%B3%86%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF %E0%B2%86%E0%B2%95%E0%B3%8D%E0%B2%B0%E0%B3%8B%E0%B2%B6 2

ಕೆರೆ ಒತ್ತುವರಿ ತೆರವಿಗೆ ವಿಪಕ್ಷಗಳ ವಿರೋಧ ದೊರೆಸ್ವಾಮಿ ಆಕ್ರೋಶ

ಬೆಂಗಳೂರು, ಮೇ ೮- ಕೆರೆ ಒತ್ತುವರಿ ಮಾಡಿಕೊಂಡಿರುವ ಭೂಗಳ್ಳ ರಿಂದ ವಿರೋಧಪಕ್ಷದ ಮುಖಂಡರುಗಳಿಗೆ ಹಣದ ಸೂಟ್ಕೇಸ್ ಹೋಗಿ ರಬೇಕು. ಹಾಗಾಗಿಯೇ...
%E0%B2%95%E0%B2%BE%E0%B2%82%E0%B2%AA%E0%B3%8C%E0%B2%82%E0%B2%A1%E0%B3%8D %E0%B2%A8%E0%B2%BF%E0%B2%B0%E0%B3%8D%E0%B2%AE%E0%B2%BF%E0%B2%B8%E0%B2%BF%E0%B2%95%E0%B3%8A%E0%B2%A1%E0%B2%B2%E0%B3%81 %E0%B2%B8%E0%B2%B0%E0%B2%95%E0%B2%BE%E0%B2%B0%E0%B2%95%E0%B3%8D%E0%B2%95%E0%B3%86 %E0%B2%95%E0%B3%8B%E0%B2%B0%E0%B3%8D%E0%B2%9F%E0%B3%8D %E0%B2%86%E0%B2%A6%E0%B3%87%E0%B2%B6

ಕಾಂಪೌಂಡ್ ನಿರ್ಮಿಸಿಕೊಡಲು ಸರಕಾರಕ್ಕೆ ಕೋರ್ಟ್ ಆದೇಶ

ವಿ ಕ ಸುದ್ದಿಲೋಕ ಬೆಂಗಳೂರು ಸಾರಕ್ಕಿ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ನಂದಿನಿ ಲೇಕ್ ಆಪಾರ್ಟ್ ಮೆಂಟ್...