Our Visitor

007500
%E0%B2%85%E0%B2%B2%E0%B3%8D%E0%B2%B2%E0%B2%BE%E0%B2%B3%E0%B2%B8%E0%B2%82%E0%B2%A6%E0%B3%8D%E0%B2%B0 %E0%B2%95%E0%B3%86%E0%B2%B0%E0%B3%86%E0%B2%97%E0%B3%86 %E0%B2%AE%E0%B3%81%E0%B2%A4%E0%B3%8D%E0%B2%A4%E0%B2%BF

42 ಮನೆ ನೆಲಸಮ  ₹50 ಕೋಟಿ ಆಸ್ತಿ ವಶ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಏ. 25- ಸಾರಕ್ಕಿ ಕೆರೆ ಒತ್ತುವರಿ ತೆರವು ಬಳಿಕ ಬೆಂಗಳೂರು ಯಲಹಂಕ ಉಪನಗರದ ಸಮೀಪದ ಅಲ್ಲಾಳಸಂದ್ರ ಕೆರೆ ಒತ್ತುವರಿ ಮಾಡಿ ಕೊಂಡು ನಿರ್ಮಿಸಿದ್ದ 42 ಮನೆಗಳನ್ನು ಕೆಡವಿ ಹಾಕಿ 50 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮರುವಶಕ್ಕೆ ಪಡೆದಿದೆ.

ಕಳೆದ 20 ವರ್ಷಗಳ ಹಿಂದೆ ಅನಧಿಕೃತ ದಾಖಲೆಗಳನ್ನು ಸೃಷ್ಟಿಸಿ ಕೆರೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಶೀಟ್ ಮತ್ತು ಹೆಂಚಿನ ಮನೆಗಳನ್ನು ಇಂದು ನೆಲಸಮ ಮಾಡಲಾಗಿದೆ.

ಎಚ್.ಬಿ.ಎಸ್. ನಗರದ ಸರ್ವೆ ನಂ. 7 ರಲ್ಲಿ 41.23 ಎಕರೆ ವಿಸ್ತೀರ್ಣವಿದ್ದ ಅಲ್ಲಾಳ ಸಂದ್ರ ಕೆರೆ ಪೈಕಿ 22 ಎಕರೆಯಷ್ಟು ಕೆರೆ ಯನ್ನು ಒತ್ತುವರಿ ಮಾಡಿಕೊಂಡು ಮನೆ ಗಳನ್ನು ನಿರ್ಮಿಸಲಾಗಿತ್ತು.

ಯಲಹಂಕ ಉಪನಗರದ ಅಲ್ಲಾಳಸಂದ್ರ ಕೆರೆ ಒತ್ತುವರಿ ಮಾಡಿಕೊಂಡಿದ್ದ ಮನೆಗಳನ್ನು ನೆಲಸಮ ಮಾಡಲಾಯಿತು.