Our Visitor

007500
%E0%B2%95%E0%B2%BE%E0%B2%82%E0%B2%AA%E0%B3%8C%E0%B2%82%E0%B2%A1%E0%B3%8D %E0%B2%A8%E0%B2%BF%E0%B2%B0%E0%B3%8D%E0%B2%AE%E0%B2%BF%E0%B2%B8%E0%B2%BF%E0%B2%95%E0%B3%8A%E0%B2%A1%E0%B2%B2%E0%B3%81 %E0%B2%B8%E0%B2%B0%E0%B2%95%E0%B2%BE%E0%B2%B0%E0%B2%95%E0%B3%8D%E0%B2%95%E0%B3%86 %E0%B2%95%E0%B3%8B%E0%B2%B0%E0%B3%8D%E0%B2%9F%E0%B3%8D %E0%B2%86%E0%B2%A6%E0%B3%87%E0%B2%B6 1 e1764759443379

ಖಾಸಗಿ ಅಪಾರ್ಟ್ಮೆಂಟ್ ನ ಕಾಂಪೌಂಡ್ ಒಡೆದು ಹಾಕಿರುವುದು.

>ವಿ ಕ ಸುದ್ದಿಲೋಕ ಬೆಂಗಳೂರು

ಸಾರಕ್ಕಿ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ನಂದಿನಿ ಲೇಕ್ ಆಪಾರ್ಟ್ ಮೆಂಟ್ ಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದ್ದರೂ ಕಾಂಪೌಂಡ್ ತರವುಗೊಳಿಸಿದ್ದ ಹಿನ್ನೆಲೆಯಲ್ಲಿ ಏ.30ರೊಳಗೆ ಕಾಂಪೌಂಡ್ ನಿರ್ಮಿಸಿಕೊಡುವಂತೆ ಹೈಕೋರ್ಟ್ ಸರಕಾರಕ್ಕೆ ನಿರ್ದೇಶನ ನೀಡಿದೆ.

ಅಪಾರ್ಟ್ಮೆಂಟ್ ವಾಸಿಗಳು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ಯನ್ನು ಆಲಿಸಿದ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯ ಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ಈ ಆದೇಶ ನೀಡಿತು.

ಸರಕಾರದ ಪರ ವಾದಿಸಿದ ಎವಿಜಿ ಎ.ಎಸ್.ಪೊನ್ನಣ್ಣ ”ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯದ ಆದೇಶವಿತ್ತು. ಆದರೆ ತಪ್ಪಿನಿಂದಾಗಿ ಅಪಾರ್ಟ್ಮೆಂಟ್ ಕಾಂಪೌಂಡ್ ಒಡೆಯಲಾಗಿದೆ”ಎಂದು ಒಪ್ಪಿಕೊಂಡರು.

ಅದಕ್ಕೆ ನ್ಯಾಯಪೀಠ ”ಸ್ಥಳೀಯ ತಹಸೀಲ್ದಾರ್ ಇದ್ದರೂ ಸಹ ಹೇಗೆ ಕಾಂಪೌಂಡ್ ತೆರವುಗೊಳಿಲಾಯಿತು? ಅಲ್ಲಿ ಮೊದಲಿದ್ದ ಸ್ಥಿತಿಯನ್ನೇ ಮರಳಿಸಿ, ಗೋಡೆ ನಿರ್ಮಿಸಿ ”ಎಂದು ಹೇಳಿತು. ಅಲ್ಲದೆ, “ನ್ಯಾಯಾಲಯದ ಆದೇಶ ವನ್ನು ಪಾಲಿಸುವಾಗ ಇನ್ನೊಂದು ನ್ಯಾಯಾಲಯ ನೀಡಿರುವ ಆದೇಶವನ್ನು ಉಲ್ಲಂಘಿಸಬಾರದು ಹೇಳಿತು. ”ಎಂದೂ

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು “ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ಕೊಟ್ಟ ಅಧಿಕಾರಿಗಳ್ಯಾರು, ಅಲ್ಲಿ ಮಿನಿ ಟೌನ್ಶಿಪ್ ತಲೆ ಎತ್ತಿರುವುದು ಹೇಗೆ? ಅದಕ್ಕೆ ಯಾರು ಹೊಣೆ?” ಎಂದು ಪ್ರದೇಶದಲ್ಲಿ ಒತ್ತುವರಿ ತೆರವುಗೊಳಿಸುವ ಕೇಳಿತು. ಸಾರಕ್ಕಿ ಕೆರೆ ಅಚ್ಚುಕಟ್ಟು ವಿವಾದಕ್ಕೆ ಸಂಬಂಧಿಸಿದಂತೆ ಏ.30ರೊಳಗೆ ನ್ಯಾಯಾಲಯದ ಆದೇಶ ಪಾಲನೆ ವರದಿ ಸಲ್ಲಿಸುವಂತೆ ಹೈಕೋರ್ಟ್ನನ ವಿಭಾಗೀಯ ಪೀಠ ಗುರುವಾರ ಸರಕಾರಕ್ಕೆ ನಿರ್ದೇಶನ ನೀಡಿತ್ತು .