Our Visitor

007500
%E0%B2%92%E0%B2%A4%E0%B3%8D%E0%B2%A4%E0%B3%81%E0%B2%B5%E0%B2%B0%E0%B2%BF %E0%B2%A4%E0%B3%86%E0%B2%B0%E0%B2%B5%E0%B3%81 %E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF %E0%B2%AA%E0%B2%A1%E0%B3%86%E0%B2%A6 %E0%B2%89%E0%B2%AA%E0%B2%B2%E0%B3%8B%E0%B2%95%E0%B2%BE%E0%B2%AF%E0%B3%81%E0%B2%95%E0%B3%8D%E0%B2%A4%E0%B2%B0%E0%B3%81 e1764751077218

ಬಿಡಿಎ ನಿರ್ಮಾಣ ಮಾಡಿರುವ 14 ಬಡಾವಣೆಗಳಲ್ಲಿ 3500 ನಿವೇಶನಗಳನ್ನು ಹಂಚಲಾಗಿದೆ. ಮೂರು ಬಡಾವಣೆ ಬಿಟ್ಟರೆ ಉಳಿದವು ಗಳ ಬಗ್ಗೆ ಬಿಡಿಎ ಬಳಿ ಸೂಕ್ತ ದಾಖಲೆ ಗಳಿಲ್ಲ. ಬಿಳೇಕಹಳ್ಳಿ, ಜಕ್ಕಸಂದ್ರ, ಶಿನಿವಾಗಿಲು, ಬಿಟಿಎಂ 6ನೇ ಹಂತ, ಎಚ್ಎಎಲ್ 3ನೇ ಹಂತ, ಬನಶಂ ಕರಿ 3,6 ಮತ್ತು 4ನೇ ಹಂತ, ಆರ್ಎಂ ವಿ 2ನೇ ಹಂತ, ಎಚ್ಎಸ್ಆರ್. ಎಚ್ಬಿಆರ್ ಲೇಔಟ್, ನಾಗರ ಭಾವಿ, ಕೋರಮಂಗಲಗಳಲ್ಲಿ ಬಿಡಿಎ ಬಡಾವಣೆ ನಿರ್ಮಾಣ ಮಾಡಿದೆ.

ಬೆಂಗಳೂರು: ನಗರದಲ್ಲಿ ಕೆರೆಗಳ ಜಾಗ

ಒತ್ತುವರಿ ತೆರವು ಕುರಿತು ಉಪಲೋಕಾ ಯುಕ್ತನ್ಯಾ. ಸುಭಾಷ್ ಬಿ ಆಡಿ ಅವರು ಸಂ ಬಂಧಪಟ್ಟ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡರಲ್ಲದೆ ಬಿಡಿಎ ನಿರ್ಮಿಸಿರುವ 14 ಬಡಾವಣೆಗಳ ಬಗ್ಗೆಯೂ ಚರ್ಚೆ ನಡೆಸಿದರು.

ನಗರ ಜಿಲ್ಲಾಧಿಕಾರಿ ಎ. ಶಂಕರ್. ಬಿಡಿಎ ಆಯುಕ್ತ ಶಾಮಭಟ್, ಉಪವಿಭಾ ಗಾಧಿಕಾರಿಗಳು, ಬಿಬಿಎಂಪಿ ಹಾಗೂಜಲಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ. ಸಂಪೂರ್ಣ ಮಾಹಿತಿ ಪಡೆ ದರು. ಮಂಗಳವಾರ ನಡೆದ ಸಭೆ ಅಪೂ ರ್ಣವಾಗಿದ್ದು ಇಂದು ಕಂದಾಯ ಇಲಾ ಖೆ ಪ್ರಧಾನ ಕಾರ್ಯದರ್ಶಿ, ನಗರಾಭಿ ವೃದ್ಧಿ ಇಲಾಖೆ ಕಾರ್ಯದರ್ಶಿಗಳ ಸಭೆ ನಡೆಸಿದ ನಂತರ ಒತ್ತುವರಿ ಕಾರ್ಯಾಚ ರಣೆ ಬಗ್ಗೆ ತೀರ್ಮಾನ ಕೈಗೊಳ್ಳದೆ ದ್ದಾರೆ.

ಹೈಕೋರ್ಟ್ ತೀರ್ಪಿನಂತೆ ಅಕ್ರಮ ನಿರ್ಮಾಣಗಳ ತೆರವು ಕಾರ್ಯಕೈಗೊಳ್ಳ ಲಾಗುತ್ತಿದೆ ಎಂದು ನಗರಜಿಲ್ಲಾಧಿಕಾರಿ ವಿ. ಶಂಕರ್ ಸಭೆಯಲ್ಲಿ ಹೇಳಿದ್ದಾರಲ್ಲದೆ ಕೆರೆ ಒತ್ತುವರಿ ಮತ್ತು ಅಕ್ರಮ ಬಡಾವಣೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಉಪಲೋಕಾಯುಕ್ತರು ಬಿಡಿಎ ನಿರ್ಮಾಣ ಮಾಡಿರುವ 14 ಬಡಾವಣೆಗಳಲ್ಲಿ 3500 ನಿವೇಶನಗಳನ್ನು ಹಂಚಲಾಗಿದೆ. ಮೂರು ಬಡಾವಣೆ ಬಿಟ್ಟರೆ ಉಳಿದವುಗಳ ಬಗ್ಗೆ ಬಿಡಿಎ ಬಳಿ ಸೂಕ್ತ ದಾಖಲೆಗಳಿಲ್ಲ ಎಂದರು.

ಬಿಳೇಕಹಳ್ಳಿ, ಜಕ್ಕಸಂದ್ರ, ಶಿನಿವಾಗಿ ಲು, ಬಿಟಿಎಂ 6ನೇ ಹಂತ, ಎಚ್ಎಎಲ್ 3ನೇ ಹಂತ, ಬನಶಂಕರಿ 3,6 ಮತ್ತು 4ನೇ ಹಂತ,ಆರ್ಎಂವಿ 2ನೇ ಹಂತ.ಎಚ್ಎಸ್ ಆರ್. ಎಚ್ಬಿಆರ್ ಲೇಔಟ್, ನಾಗರ ಭಾವಿ, ಕೋರಮಂಗಲಗಳಲ್ಲಿ ಬಿಡಿಎ ಬಡಾವಣೆ ನಿರ್ಮಾಣ ಮಾಡಿದೆ.

ಇವುಗಳಲ್ಲಿ ಮೂರು ಬಡಾವಣೆಗ ಳಿಗೆ ಮಾತ್ರ ಸರ್ಕಾರಕ್ಕೆ ಅಧಿಸೂಚನೆಗೆ ಮನವಿ ಮಾಡಲಾಗಿದೆ. ಉಳಿದ 11 ಬಡಾ ವಣೆಗಳಿಗೆ ಅಧಿಸೂಚನೆ ಹೊರಡಿಸಿಲ್ಲ. ಬಿಡಿಎ ಬಳಿ ದಾಖಲೆಗಳಿಲ್ಲ. ಈ ಬಗ್ಗೆ ಸರ್ಕಾರದಲ್ಲಿಯೇ ತೀರ್ಮಾನವಾಗಬೇ ಕಿದೆ ಎಂದು ಅವರು ತಿಳಿಸಿದರು.