Our Visitor

007500
%E0%B2%AA%E0%B2%9F%E0%B3%8D%E0%B2%9F%E0%B2%82%E0%B2%A6%E0%B3%82%E0%B2%B0%E0%B3%81 %E0%B2%85%E0%B2%97%E0%B3%8D%E0%B2%B0%E0%B2%B9%E0%B2%BE%E0%B2%B0%E0%B2%A6%E0%B2%B2%E0%B3%8D%E0%B2%B2%E0%B2%BF %E0%B2%85%E0%B2%95%E0%B3%8D%E0%B2%B0%E0%B2%AE %E0%B2%92%E0%B2%A4%E0%B3%8D%E0%B2%A4%E0%B3%81%E0%B2%B5%E0%B2%B0%E0%B2%BF %E0%B2%A4%E0%B3%86%E0%B2%B0%E0%B2%B5%E0%B3%81 %E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%9A%E0%B2%B0%E0%B2%A3%E0%B3%86 e1764840465112

ಪಟ್ಟಂದೂರು ಅಗ್ರಹಾರದಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ

ವೈಟೀಲ್ ಪಟ್ಟಂದೂರು ಅಗ್ರಹಾರದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಒತ್ತುವರಿ ತೆರವು ಕಾರ್ಯಾ ಚರಣೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಬೃಹತ್ ಕಟ್ಟಡವನ್ನು ತೆರವುಗೊಳಿಸಲಾಯಿತು.

ಕೆಆರ್ ಪುರ ತಾಲೂಕಿನ ಪಬ್ಬಂದೂರು ಅಗ್ರಹಾರದಲ್ಲಿ ಸರ್ವೆ ನಂ.42ರಲ್ಲಿ ಪ್ರೆಸ್ಟೀಜ್ ಕಂಪೆನಿ ಅಕ್ರಮವಾಗಿ ನಿರ್ಮಿಸಿದ್ದ 200 ವಿಲ್ಲಾಗಳನ್ನು ತೆರವುಗೊಳಿಸಲಾಯಿತು. ಈ ಹಿಂದೆ ಕಐಎಡಿಬಿಗೆ ಸೇರಿದ ಈ ಜಾಗವನ್ನು ಜಾಯ್ ಕಂಪೆನಿಗೆ ಅಂದಿನ ಜಿಲ್ಲಾಧಿಕಾರಿ ಗುತ್ತಿಗೆಗೆ ನೀಡಿದ್ದರು.

ಜಾಯ್ ಕಂಪನಿ ಈ ಭೂಮಿಯನ್ನು ಪ್ರೆಸ್ಟೀಜ್ ಕಂಪನಿಗೆ ಮಾರಿಕೊಂಡಿತ್ತು. ಜಾಗ ಖರೀದಿಸಿದ್ದ ಪ್ರೆಸ್ಟೀಜ್ ಕಂಪನಿಯವರು 3 ಎಕರೆ 26 ಗುಂಟೆ ಪ್ರದೇಶದಲ್ಲಿ ಅಪಾರ್ಟ್ ಮೆಂಟ್ ಮಾದರಿಯ 200 ವಿಲ್ಲಾಗಳನ್ನು ನಿರ್ಮಿಸಿತ್ತು. ಅಕ್ರಮ ಒತ್ತುವರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಈ ವಿಲ್ಲಾಗಳನ್ನು ಇಂದು ಬೆಳಗ್ಗೆ 11.30 ರಿಂದ ಆರಂಭವಾದ ಕಾರ್ಯಾಚರಣೆ ವೇಳೆ ತೆರವುಗೊಳಿಸಲಾಯಿತು. ಸ್ಥಳದಲ್ಲಿ ಜಿಲ್ಲಾಧಿಕಾರಿ ರವಿಶಂಕರ್, ತಹಸೀಲ್ದಾರ್ ಹರೀಶ್ನಾಯಕ್, ಅಧಿಕಾರಿ ಗಳಾದ ಮಹೇಶ್ವಾಬು, ವೆಂಕಟಾಚಲಪತಿ ಪರಿಶೀಲನ ನಡೆಸಿ ಕಾರ್ಯಾಚರಣೆಗೆ ಮುಂದಾದರು.